ನಮ್ಮಪುಸ್ತಕ
	ಮಕ್ಕಳಿಗಾಗಿ ಮೀಸಲಾಗಿದ್ದ ಒಂದು ಮಾಸಪತ್ರಿಕೆ. ದೇವುಡು ನರಸಿಂಹಶಾಸ್ತ್ರಿಗಳು ಇದರ ಸಂಪಾದಕರಾಗಿದ್ದರು. ಪತ್ರಿಕೆ 1936ರ ಜುಲೈ ತಿಂಗಳಲ್ಲಿ ಪ್ರಾರಂಭವಾಯಿತು. 1/4 ಡಿಮೈ ಆಕಾರ. ಪುಟಗಳು 34. ವೇದ, ಪುರಾಣ, ಉಪನಿಷತ್ತು, ಕಾವ್ಯ ಮತ್ತು ಬೌದ್ಧ ಜಾತಕಕಥೆಗಳು ಸಚಿತ್ರವಾಗಿ ಸರಳ ಶೈಲಿಯಲ್ಲಿರುತ್ತಿದ್ದವು. ನಿಮಗೆ ಗೊತ್ತೆ, ಸಮುದ್ರದಲ್ಲಿ, ಆಕಾಶದಲ್ಲಿ ಮೊದಲಾದ ಶೀರ್ಷಿಕೆಗಳಲ್ಲಿ ಮಕ್ಕಳಿಗಾಗಿ ಬುದ್ಧಿಪ್ರಚೋದಕ ಲೇಖನಗಳಿರುತ್ತಿದ್ದವು. ಚಿತ್ರಲಿಪಿ, ದಾರಿ ತೋರಿಸಿ, ಕಳ್ಳನನ್ನು ಹಿಡಿಯಿರಿ, ಇತ್ಯಾದಿ ಸ್ವಾರಸ್ಯ ಚಿತ್ರದೊಗಟಗಳು ಮಕ್ಕಳ ಆಕರ್ಷಣೆಗಳಾಗಿದ್ದುವು.

	ನಮ್ಮ ಪುಸ್ತಕ ಮಕ್ಕಳ ಪತ್ರಿಕೆಯಾದರೂ ಹಿರಿಯರಿಗೆ ಉಪಯುಕ್ತವಾದ ಒಂದೆರಡು ವಿಷಯಗಳೂ ಪ್ರತಿ ತಿಂಗಳೂ ಪ್ರಕಟವಾಗುತ್ತಿದ್ದುವು. ತಾಯಂದಿರಿಗೆ ಧರ್ಮರಹಸ್ಯ ಸಹಕಾರ, ಇಂಗ್ಲಿಷ್ ವ್ಯಾಕರಣ ಮೊದಲಾದವು ಇಂಥ ಕೆಲವು ಲೇಖನಗಳು.
(ಬಿ.ಎಸ್.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ